ಇನ್ನೆಷ್ಟು ದಿನ ಈ ಯಾಂತ್ರಿಕ ಬದುಕು!!?
Wednesday, October 7, 2009
ಯಾಂತ್ರಿಕ ಬದುಕಿನತ್ತ ಈ ಜೀವನ
ಇನ್ನೆಷ್ಟು ದಿನ ಈ ಯಾಂತ್ರಿಕ ಬದುಕು!!?
Posted by vee at 2:54 AM 0 ನೀವು ಬರೆದದ್ದು
Wednesday, August 5, 2009
ಸಂಬಂಧಗಳು ಬೋರು ಅನ್ನಿಸುತ್ತಿವೆಯೇ?

Posted by vee at 2:59 AM 1 ನೀವು ಬರೆದದ್ದು
Monday, June 22, 2009
Friday, June 5, 2009
ಸಾಧ್ಯವಾದರೆ ಚಿತ್ರದಲ್ಲಿರುವವರನ್ನು ಗುರುತಿಸಿ
Posted by vee at 6:03 AM 2 ನೀವು ಬರೆದದ್ದು
Thursday, May 7, 2009
ಮಮ್ಮಿ ನಿನ್ನ ಪ್ರೀತಿ ಬಲು ಮಧುರ
ಎಂದೆಂದಿಗೂ ನೀನೇ ನನ್ನ ಬಾಳಿಗೆ ದೀಪ, ಚೇತನ, ದಾರಿ, ಆದರ್ಶವಾದಿ. ಬಹುಶ: ನಿನಗೆ ಮಾತ್ರವೇ ಕಾಣುತ್ತೆ ಮಮ್ಮಿ, ನಾ ಹೇಳದಿದ್ದರೂ ನನ್ನ ಸಂತೋಷ, ನೋವು, ನಲಿವು, ಆನಾರೋಗ್ಯ, ಸಂಭ್ರಮದ ನಿಜ ಅರ್ಥ ತಿಳಿಯುತ್ತದೆ. ನನ್ನನ್ನು ಒಬ್ಬ ಆಪ್ತ ಸ್ನೇಹಿತೆಗಿಂತಲೂ ಹೆಚ್ಚಾಗಿ ಕಂಡವಳು ನೀನು.
Posted by vee at 3:01 AM 1 ನೀವು ಬರೆದದ್ದು
Friday, January 30, 2009
ಮೊಗ್ಗಿನ ಮನಸ್ಸು ಚೆನ್ನಾಗಿತ್ತು!!
ಅದೆಷ್ಟೋ ದಿನಗಳು ಕಳೆದ ನಂತರ ಒಂದು ಉತ್ತಮ ಸಿನಿಮಾ ನೋಡಿದ ಅನುಭವ ಮೊಗ್ಗಿನ ಮನಸ್ಸನ್ನು ನೋಡಿದ ಮೇಲಾಯಿತು. ಮೊಗ್ಗಿನ ಮನಸ್ಸು ನೋಡುವ ಹಂಬಲ ನಮ್ಮ ಮನಸ್ಸಿನಲ್ಲಿರಲಿಲ್ಲ ಆದರೂ ಸಮಯ ವ್ಯಯಿಸಲೆಂದು ರೂಮಿನಲ್ಲಿ ಕೂತು ಸಿನಿಮಾ ನೋಡಿದೆವು. ಪಿನ್ ಪಾಯಿಂಟ್ ಸದ್ದಿಲ್ಲ
ದೇ ಎಲ್ಲರೂ ಮೌನವಾಗಿ ಸಿನಿಮಾ ನೋಡುತ್ತಿದ್ದರು. ಸಿನಿಮಾ ಮುಗಿದ್ದದ್ದೇ ತಡ ಎಲ್ಲರೂ ‘ಇದು ಮುಂಗಾರು ಮಳೆಗಿಂತಲೂ ಚೆನ್ನಾಗಿದೆ ಅಲ್ವಾ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಹಾಡುಗಳಂತೂ ಸುಪರ್... ಹುಡುಗಿರ ಅಭಿನಯವನ್ನು ಕಂಡು ಹುಡುಗರು (ಯಶ್ ಅಭಿನಯ ಓಕೆ) ಅಭಿನಯ ಕಲಿಯಬೇಕಿತ್ತು. ಸಿನಿಮಾದಲ್ಲಿ ಹುಡುಗರ ನಟನೆ ನಾಟಕೀಯವಾಗಿತ್ತು ಎಂಬುದರ ಹೊರತು ಎಲ್ಲವೂ ಸುಪರ್... ಕ್ಯಾಮೆರಾ ವನ್ನು ಮಂಗಳೂರಿಗೆ ಒಂದು ಬಾರಿ ಹೋಗುವಂತೆ ಪ್ರಚೋದಿಸುತ್ತದೆ.
ಹೆಣ್ಣಿನ ಮನಸ್ಸು, ಅವಳ ಪ್ರತಿನಿತ್ಯದ ಬದುಕನ್ನು ಚೆನ್ನಾಗಿ ಬಿಂಬಿಸಿದ ‘ಮೊಗ್ಗಿನ ಮನಸ್ಸು’ ನಮ್ಮ ಮನಸ್ಸನ್ನು ಗೆದ್ದಿದೆ. ನಿರ್ದೇಶಕರಿಗೆ ಅನಂತ ವಂದನೆಗಳು. ಇಂಥಹ ಉತ್ತಮ ಕಥೆಯನ್ನು ಆಯ್ಕೆ ಮಾಡಿ ನಮಗೆ ತೋರಿಸಿದ ಸಿನಿಮಾ ನಿರ್ಮಾಪಕ ಹಾಗೂ ತಂಡಕ್ಕೆ ಅಭಿನಂದನೆಗಳು. ಸಿನಿಮಾ ನೋಡಿದ ಮೇಲೆ ಅದೆಷ್ಟೊ ಬಾರಿ ಅಂದು ಕೊಂಡಿದ್ದೆ. ನನ್ನ ಬ್ಲಾಗ್ ನಲ್ಲಿ ಮೊಗ್ಗಿನ ಮನಸ್ಸಿನ ಕುರಿತು ಬರೆಯಬೇಕೆಂದು... ಇಂದು ಸಮಯ ಸಿಕ್ಕಿತು.
ಧನ್ಯವಾದಗಳು!!
Posted by vee at 1:24 AM 3 ನೀವು ಬರೆದದ್ದು
Friday, December 5, 2008
ಚುಮುಚುಮು ಚಳಿಯ ಜತೆ ಕ್ರಿಸ್ ಮಸ್ ಸಂಭ್ರಮ
ಈ ನೆನಪಿನಲ್ಲೇ ಕ್ರೈಸ್ತರು ಗೋದಲಿ ನಿರ್ಮಿಸುತ್ತಾರೆ. ನಕ್ಷತ್ರ ತೂಗುತ್ತಾರೆ, ಬಾಲ ಯೇಸುವಿನ ಶಿಲ್ಪವನ್ನಿಟ್ಟು ಅಕ್ಕ ಪಕ್ಕದಲ್ಲಿ ಸಂತ ಜೋಸೆಫ್, ಮೇರಿ ಮಾತೆಯ ಪ್ರತಿಮೆಯನ್ನಿಡುತ್ತಾರೆ. ‘ಕ್ರಿಸ್ ಮಸ್ ಟ್ರೀ’ ಕುರಿತಾಗಿ ಹೇಳುವುದಾದರೆ ಕ್ರಿಸ್ ಮಸ್ ಸಂಭ್ರಮವನ್ನು ಹೆಚ್ಚಿಸುವ ಉದ್ದೇಶದಿಂದ ಸಂತ ಫ್ರಾನ್ಸಿಸ್ ಅಸ್ಸಿಸಿ ಎಂಬವರು ಮೊದಲ ಬಾರಿಗೆ ಕ್ರಿಸ್ಮಸ್ ಟ್ರೀ ಮಾಡಿದರು. ಮುಂದೆ ಈ ಆಚರಣೆ ಪ್ರಪಂಚದಲ್ಲೆಡೆ ಪಸರಿಸಿತು.

ಸಂತ ನಿಕೋಲಸ್ ಎಂಬಾತ ಕ್ರಿಸ್ಮಸ್ ದಿನದಂದು ಬಡವರಿಗಾಗಿ ಕಾಣಿಕೆಗಳನ್ನು ಕೊಡುತ್ತಿದ್ದರು. ಅವರು ತಮ್ಮ ವಿಶಿಷ್ಟ ಉಡುಗೆಯಿಂದ ಮಕ್ಕಳ ಮನಗೆದ್ದರು. ಅವರ ನೆನಪಿಗಾಗಿ ಸಾಂತಾ ಕ್ಲಾಸ್ ಈಗಲೂ ಡಿಸೆಂಬರ್ ತಿಂಗಳಲ್ಲಿ ನಮ್ಮ ಮನೆಮುಂದೆ ಪ್ರತ್ಯಕ್ಷರಾಗುತ್ತಾರೆ.
ಜತೆಗೆ ಕುಣಿಯುವುದು. ಡಿಸೆಂಬರ್ ೨೫ ರಿಂದ ಕ್ಯಾರಲ್ಸ್ ಜತೆಗೆ ಸಾಂತಾಕ್ಲಾಸ್ ಮನೆಮನೆಗೆ ಆಗಮಿಸಿ ಸಂತಸ ಹಂಚಿಕೊಳ್ಳುವುದು.Posted by vee at 9:49 PM 2 ನೀವು ಬರೆದದ್ದು
Tuesday, October 28, 2008
ದೀಪಾವಳಿ ಮಜಾನೇ ಬೇರೆ
ಬಣ್ಣ ಬಣ್ಣದ ಪಟಾಕಿಗಳ ಸದ್ದು...
ಒಂದೆಡೆ ವಾಯು ಮಾಲಿನ್ಯ ಇನ್ನೊಂದೆಡೆ ಶಬ್ದ ಮಾಲಿನ್ಯ ಆಗುತ್ತಿದ್ದರೂ ದೀಪಾವಳಿ ಪಟಾಕಿ ಸುಡುವುದರಲ್ಲಿರುವ ಮಜಾನೇ ಬೇರೆ. ಪಟಾಕಿ ಸುಡುವಾಗ ಏನೋ ಒಂಥರಾ ಮಜಾ... ಮನಸ್ಸಿಗೆ ಉಲ್ಲಾಸ ಸಂಭ್ರಮ. ಏನನ್ನೋ ಗೆದ್ದುಕೊಂಡ ಸಂಭ್ರಮ.
ಪತ್ರಿಕೆಗಳಿಗೆ ವಿಶೇಷ ಸಂಚಿಕೆ ಜೊತೆಗೆ ವಾರ್ಷಿಕ magazine (ದೀಪಾವಳಿ ವಿಶೇಷಾಂಕ) ಹೊರ ತರುವ ಸಂಭ್ರಮ... ಜಾಹೀರಾತುದಾರರಿಗಂತೂ ಸುಗ್ಗಿಯೋ ಸುಗ್ಗಿ... ಟಿವಿ ಮತ್ತು ರೇಡಿಯೋದಲ್ಲಿ ಹಬ್ಬದ ವಿಶೇಷ ಕಾರ್ಯಕ್ರಮಗಳ ಪ್ರಸಾರ
ಎಲ್ಲೆಲ್ಲಿ ನೋಡಿದರೂ ಸಂಭ್ರಮ... ರಾತ್ರಿ ಹೊತ್ತು ಆಕಾಶದೆಡೆಗೆ ಕಣ್ಣು ಹಾಯಿಸಿದರೆ ವ್ಹಾ... ರಸದೌತಣ... ವಿನೂತನ ಜಗತ್ತಿಗೆ ಪಯಣಿಸಿದ ಅನುಭವ... ಪ್ರತೀ ದಿನ ದೀಪಾವಳಿ ಹಾಗಿರಬಾರದೇ ಎನ್ನೊ ಹಂಬಲ.
Posted by vee at 3:49 AM 2 ನೀವು ಬರೆದದ್ದು
Thursday, August 14, 2008
ನಾವು ಸ್ವತಂತ್ರರು ಅಂತಾರೆ ಎಲ್ಲಾ..
Posted by vee at 5:06 AM 3 ನೀವು ಬರೆದದ್ದು
Tuesday, June 10, 2008
ಮಗಳಿಗಾಗಿ ಪಿತ್ತಜನಕಾಂಗವನ್ನೇ ದಾನ ಮಾಡಿದ ಅಮ್ಮ... ನಿನಗೆ ನೂರಾರೂ ವಂದನೆಗಳು
ನೊಂದ ತಾಯಿ ಶ್ವೇತಾ ತನ್ನ ಪತಿಯಾದ ದಿಯೋದತ್ತಾ (ಈತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಇಂಜಿನಿಯರ್)ನೊಡನೆ ಸೇರಿ ಬೆಂಗಳೂರಿನಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಮಗಳು ಪ್ರಾಚಿಯನ್ನು ದಾಖಲಿಸಿದರು. ಅಲ್ಲಿನ ವೈದ್ಯರು ಬಹುಬೇಗನೆ ಕಾರ್ಯ ನಿರ್ವಹಿತರಾಗಿ ಎಲ್ಲವನ್ನೂ ಪರೀಕ್ಷಿಸಿ, ‘ಮಗು ಆರೋಗ್ಯವಂತಳಾಗಬೇಕಾದರೆ ಆರೋಗ್ಯವಂತ ತಂದೆ/ ತಾಯಿಯ ಪಿತ್ತ ಜನಕಾಂಗದ ಭಾಗವೊಂದನ್ನು ಕೊಡಬೇಕೆಂದು’ ತಿಳಿಸಿದರು. ವಿಷಯ ತಿಳಿದ ಶ್ವೇತಾಳು ಸ್ವಲ್ಪವೂ ವಿಚಲಿತಳಾಗದೇ ತನ್ನ ಪಿತ್ತ ಜನಕಾಂಗ (Liver) ವನ್ನೇ ಕೊಟ್ಟಳು. ಸರಿಯಾದ ರೀತಿಯಲ್ಲಿ ವೈದ್ಯರುಗಳು, ಮಣಿಪಾಲ್ ಆಸ್ಪತ್ರೆಯ ಇತರೆ ಸಿಬ್ಬಂದಿ ವರ್ಗದವರ ಸಹಕಾರದಿಂದ ಎಲ್ಲವೂ ಸರಾಗವಾಗಿ ನಡೆಯಿತು.Posted by vee at 3:07 AM 7 ನೀವು ಬರೆದದ್ದು
Tuesday, April 8, 2008
ಸೈಕಲ್ ಕಳ್ಳ (the bicycle thief)
ದಿ ಬೈಸಿಕಲ್ ಥೀಫ್ ಸಿನಿಮಾವು ನೈಜತೆಯಿಂದ ಕೂಡಿದ್ದು, ಅಂತ್ಯದವರೆಗೂ ಕುತೂಹಲವನ್ನು ಉಂಟು
ಮಾಡುತ್ತದೆ.
ಎರಡನೇ ಮಹಾಯುದ್ದದ ಪೂರ್ವಕಾಲದಲ್ಲಿ ಜನರು ಉದ್ಯೋಗಕ್ಕಾಗಿ ಅಲೆಯುವ ಪರಿ, ಉದ್ಯೋಗ ಲಭಿಸಿದ ಮೇಲೆ ಅದನ್ನು ಉಳಿಕೊಳ್ಳಲು ಒದ್ದಾಡುವ ಪರಿ... ಮುಂತಾದವನ್ನು ವಿಟ್ಟೊರಿ ಡೆ ಸಿಕಾ ಅವರು ಈ ಸಿನಿಮಾದಲ್ಲಿ ತುಂಬಾನೇ ಸೊಗಸಾಗಿ ನಿರೂಪಿಸಿದ್ದಾರೆ.
ಅಂಟೋನಿಯೋ (ನಾಯಕ) ಎರಡನೇ ಮಹಾಯುದ್ದದ ಪೂರ್ವ ಕಾಲದಲ್ಲಿ, ತನ್ನಂತಿರುವ ಹಲವು ನಿರುದ್ಯೋಗಿಗಳಂತೆ ಉದ್ಯೋಗ ಹರಸುತ್ತಿರುವಾಗ, ಒಂದೆಡೆ ಸೈಕಲ್ ಇದ್ದವನಿಗೆ ಉದ್ಯೋಗ ಇರುವ ವಿಷಯ ತಿಳಿದು ಅ ಕೆಲಸ ತನಗೆ ಲಭಿಸಬೇಕೆಂದು ಮನೆಗೆ ತೆರಲಿ ಹೆಂಡತಿಯ ಸಹಾಯದಿಂದ ಮನೆಯಲ್ಲಿದ್ದ ಬೆಡ್ ಶೀಟ್ ಮುಂತಾದವುಗಳನ್ನು ಮಾರಿ ಹೊಸದಾದ ಸೈಕಲ್ ಒಂದನ್ನು ಖರೀದಿಸುತ್ತಾನೆ. ಜೊತೆಗೆ ಉದ್ಯೋಗವನ್ನೂ ಪಡೆಯುತ್ತಾನೆ.

ಮೊದಲ ದಿನ ಸೈಕಲ್ಲನ್ನು ಪಕ್ಕದಲ್ಲಿಟ್ಟು, ತನ್ನ ಕೆಲಸ ಪ್ರಾರಂಭಿಸುವಾಗ ಒಬ್ಬ ಕಳ್ಳ ಬಂದು ಸೈಕಲ್ಲನ್ನು ಅಪಹರಿಸುತ್ತಾನೆ. ಇದರಿಂದ ವಿಚಲಿತನಾದ ಅಂಟೋನಿಯೋ ಕೆಲಸವನ್ನು ಅಲ್ಲೇ ನಿಲ್ಲಿಸಿ ಸೈಕಲ್ ಕದ್ದ ಕಳ್ಳನ ಹಿಂದೆ ಓಡುತ್ತಾನೆ.
ಸೈಕಲ್ಲಿನ ಬಿಡಿಭಾಗಗಳನ್ನು ಮಾರಿರಬಹುದೆಂಬ ಗುಮಾನಿ ಮೇರೆಗೆ, ಸೈಕಲ್ ಬಿಡಿಭಾಗಗಳನ್ನು ಮಾರುವ ಶಾಪ್ ಗಳಿಗೆ ಹೋಗಿ ಹುಡುಕಾಡುತ್ತಾರೆ.ಅಲ್ಲೂ ಸಿಗದಾಗ ತೀರ ನಿರಾಶಿತನಾಗುತ್ತಾನೆ. ಒಂದು ಸಾರಿ ಅಂಟೋನಿ
ಯೋ ಬೇರೆಯೊಬ್ಬನ ಸೈಕಲ್ ಕದಿಯುವ ಸಾಹಸಕ್ಕೆ ಕೈ ಹಾಕಿ, ಅದರಲ್ಲಿ ಸಿಕ್ಕಿಹಾಕಿ ಎಲ್ಲರಿಂದ ಒದೆ ತಿನ್ನುತ್ತಾನೆ.ಮಳೆ, ಬಿಸಿಲು, ಹಸಿವು ಯಾವುದನ್ನೂ ಲೆಕ್ಕಿಸದೆ ತನ್ನ ಮಗನೊಡನೆ ಸೈಕಲ್ ಹುಡುಕುವ ಪ್ರಯತ್ನ ಸೋಜಿಗವಾದುದು. ಚರ್ಚ್ ಗೆ ಹೋದರೂ ಅವರ ಮನವೆಲ್ಲಾ ಸೈಕಲ್ ನತ್ತಲೇ ಇರುತ್ತದೆ. ಭವಿಷ್ಯ ಹೇಳುವವರ ಹತ್ತಿರನೂ ಹೋಗಿ ತನ್ನ ಸೈಕಲ್ ಸಿಗಬಹುದೇ ಎಂದು ನಾಯಕ ಕೇಳುವಾಗ ಅಯ್ಯೋ ಅನ್ನಿಸುತ್ತೆ.
ಚಿತ್ರದ ಕೊನೆಗೂ ಅಂಟೋನಿಯೋಗೆ ತನ್ನ ಸೈಕಲನ್ನು ಹುಡುಕಲು ಸಾಧ್ಯವಾಗುವುದಿಲ್ಲ. ಸೈಕಲ್ ಸಿಕ್ಕರೆ ತನ್ನ ಬಡತನವನ್ನು ಗೆಲ್ಲಬಹುದು ಎಂಬ ನಾಯಕನ ಕನಸ್ಸು ಕನಸ್ಸಾಗಿಯೇ ಉಳಿಯುತ್ತದೆ. ಅಂಟೋನಿಯೋ ಮಗನಂತೂ ಸೈಕಲ್ಲನ್ನು ಒಂದೇ ಬಾರಿ ನೋಡಿದ್ದರೂ ಅದರ ಪ್ರತೀ ಭಾಗವನ್ನು ತನ್ನಲ್ಲಿ ನೆನಪಿಟ್ಟುಕೊಂಡಿರುತ್ತಾನೆ. ಇವೆಲ್ಲ ಸೈಕಲ್ ಹುಡುಕುವ ಅವರ ಪರಿಶ್ರಮದಲ್ಲಿ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಒಮ್ಮೆ ನೋಡಿದರೆ ಸದಾಕಾಲ ನೆನಪಿನಲ್ಲಿ ಉಳಿಯುವಂತಹ, ಹಂತ ಹಂತದಲ್ಲೂ ಕುತೂಹಲಮುಡಿಸುವ ಸಿನಿಮಾ ಇದಾಗಿದೆ.
Posted by vee at 2:54 AM 7 ನೀವು ಬರೆದದ್ದು
Tuesday, March 18, 2008
ಬ್ಲಾಗರ್ಸ್ ಮಿಲನ
ಎಲ್ಲರಲ್ಲೂ ಹೊಸ ಉತ್ಸಾಹ, ಸಂತಸ, ಹುರುಪು ಇತರರನ್ನು ಪರಿಚಯಿಸುವ ತವಕ ಎದ್ದು ಕಾಣುತ್ತಿತ್ತು.
ಕೆಂಡಸಂಪಿಗೆಯ ಅಬ್ದುಲ್ ರಶೀದ್ ಅವರನ್ನು ಮೊದಲೇ ಭೇಟಿಯಾಗಿದ್ದೆ. ಆದರೆ ಸಂಪದದ ನಾಡಿಗ್, ದಟ್ಸ್ ಕನ್ನಡದ ಶ್ಯಾಮ್, ವಿಶ್ವ ಕನ್ನಡದ ಪವನಜ ಸಹಿತ ನಿಮ್ಮೆಲ್ಲರನ್ನೂ ಮುಖತಃ ಭೇಟಿ ಆಗುವ ಅವಕಾಶ ಇಷ್ಟು ಬೇಗ ಲಭಿಸಬಹುದೆಂದು ನಾನು ನಿರೀಕ್ಷಿಸಿರಲಿಲ್ಲ.
ಅದ್ರೂ ನಿರಾಶೆಯಾಯಿತು...
ಮೊದಲ ಭೇಟಿಯಲ್ಲಿ ಸಂಪನ್ಮೂಲ ವ್ಯಕ್ತಿಗಳು ಅವಶ್ಯ ವೆನ್ನಿಸಿದ ಮಾಹಿತಿಗಳನ್ನು ನೀಡಿದ್ದೇನೋ ಸರಿ ಆದ್ರೆ...
ಎಲ್ಲರ ಪರಿಚಯ ಮಾಡಲು ಪ್ರಣತಿ ಒಂದು ಅವಕಾಶ ಕಲ್ಪಿಸಿದ್ದರೆ....?
ಕಾರ್ಯಕ್ರಮಕ್ಕೆ ಒಂದು ಕಳೆ ಬರುತ್ತಿತ್ತು. ಗುಂಪು ಚಟುವಟಿಕೆ ಮುಂತಾದವುಗಳ ಮುಖಾಂತರ ಒಬ್ಬರಿಗೊಬ್ಬರ ಪರಿಚಯ ಮಾಡಿಸುತ್ತಿದ್ದರೆ ಪ್ರಣತಿಗೆ ಡಬ್ಬಲ್ ಕ್ರೆಡಿಟ್ ಬರುತ್ತಿತ್ತೇನೋ...
ಪರವಾಗಿಲ್ಲ ... ಮುಂದಿನ ಬಾರಿ ಪ್ರಣತಿ ತಂಡ ಅಂಥಹ ಲೋಪಗಳಿಗೆ ಅವಕಾಶ ಕೊಡಲ್ಲ ಹಾಗೂ ಬಹು ಬೇಗನೇ ಮಗದೊಂದು ಬ್ಲಾಗರ್ಸ್ ಮಿಲನವನ್ನು ಹಮ್ಮಿಕೊಳ್ಳುತ್ತದೆ ಎಂಬ ಆಶಯ ನನ್ನದು. ಅ ದಿನ ನಾವೆಲ್ಲ ಮತ್ತೆ ಭೇಟಿಯಾಗೋಣ... ಅಲ್ಲಿಯವರೆಗೆ ಇದೇ ಅಂತರ್ಜಾಲದಲ್ಲಿ ಭೇಟಿಯಾಗುತ್ತಿರೋಣ...
Posted by vee at 5:47 AM 3 ನೀವು ಬರೆದದ್ದು
Wednesday, February 27, 2008
ನನ್ನ ಸಾವಿಗೆ ನಾನೇ ಕಾರಣ!!!
ಜನರಿಗೆ ಹೇಗೆ ಬರುತ್ತೆ? ಬಂದಂತಹ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಇಲ್ಲವೇ? ಅಥವಾ ಪ್ರಪಂಚದಲ್ಲಿ ತಾನೇ ಈ ಪರಿಯ ದುಃಖ ಬೇಸರವನ್ನು ಅನುಭವಿಸುತ್ತಿದ್ದೇನೆ. ಉಳಿದವರೆಲ್ಲರೂ ಅದ್ರಷ್ಟಶಾಲಿಗಳು. ತಾನು ಮಾತ್ರ ಈ ಪ್ರಪಂಚಕ್ಕೆ ಬಾರವಾಗಿಬಿಟ್ಟೆ ಎಂಬ ದುರ್ಬಲ ಯೋಚನೆಗಳೇ ಆತ್ಮಹತ್ಯೆ ಮಾಡಲು ಪ್ರಚೋದಿಸುತ್ತವೆಯೇ? ತಾವು ಎದುರಿಸಿದ ಕಷ್ಟಗಳನ್ನೇ ಈ ಜನ ಯಾಕೆ ಚಾಲೆಂಚ್ ಆಗಿ ಸ್ವೀಕರಿಸುವುದಿಲ್ಲ? ತನ್ನಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂಬುದನ್ನು ಇವರು ಯಾಕೆ ಸಾಧಿಸಿ ತೋರಿಸಬಾರದು. ಒಂದಿಬ್ಬರು ಏನೋ ಹೇಳಿದ ಮಾತ್ರಕ್ಕೆ, ಮೋಸ ಮಾಡಿದ ಮಾತ್ರಕ್ಕೆ, ಸುಳ್ಳು ಅರೋಪ ಹೊರಿಸಿದ ಮಾತ್ರಕ್ಕೆ, ಅಪಪ್ರಚಾರ ಮಾಡಿದ್ದಕ್ಕೆ, ತನ್ನ ಘನತೆಗೆ ದಕ್ಕೆ ಬರುವಂತೆ ವರ್ತಿಸಿದ್ದಕ್ಕೆ, ತನ್ನಿಂದ ತಪ್ಪಿಲ್ಲದಿದ್ದರೂ ಅಪರಾಧಿ ತರಹ ನೋಡಿದ್ದಕ್ಕೆ, ಅದ್ಯಾರೊ ಸುಮ್ ಸುಮ್ನೆ ಬೈದದಕ್ಕೆ ಅತ್ಯಹತ್ಯೆ ಒಂದೇ ದಾರಿಯಾಗಿ ಬಿಟ್ಟಿತ್ತೇ?Posted by vee at 3:03 AM 4 ನೀವು ಬರೆದದ್ದು
Monday, February 4, 2008
ಮನುವಿನ ನೂಪುರ ಭ್ರಮರಿ
ಲ್ಲಿ ಅದೆನೋ ಹೊಂದಾಣಿಕೆ, ಆತ್ಮೀಯತೆ ಇತ್ತು. Posted by vee at 1:38 AM 2 ನೀವು ಬರೆದದ್ದು
Wednesday, January 23, 2008
ಸದಾಕಾಲ ನೆನಪಿನಲ್ಲಿರುವವರು...
ಯಾಕೋ ಗೊತ್ತಿಲ್ಲ... ಕೆಲವರು ನನಗೆ ಪ್ರತಿನಿತ್ಯ ನೆನಪಾಗುತ್ತಾರೆ. ಅವರಲ್ಲಿ ಪ್ರತೀ ನಿತ್ಯ ಮಾತನಾಡಬೇಕು, ಅವರ ಮಾತುಗಳನ್ನು ಕೇಳಬೇಕು. ಅವರ ಮಾತುಗಳನ್ನು ಕೇಳುತ್ತಾ ಕೇಳುತ್ತಾ ನಾನೂ ಆದರ್ಶವಾದಿಯಾಗಬೇಕು ಎಂದು ಅನ್ನಿಸುತ್ತೆ. ನನಗೆ ಎಲ್ಲೆಂದರಲ್ಲಿ ಸ್ನೇಹಿತರು, ಮಾರ್ಗದರ್ಶಕರು... ಸಿಗುತ್ತಾರೆ. ಅದರೆ ಬಹುಕಾಲ (ಈಗಲೂ) ಹಚ್ಚಹಸಿರಾಗಿ ನನ್ನ ಮನಪಟಲದಲ್ಲಿ ಇರುವವರು - ನನ್ನ ಶಿಕ್ಷಕಿ ರತಿ ಮೇಡಂ, ಲೇಖಕಿ ನೇಮಿಚಂದ್ರ, ನನ್ನ ಸೀನಿಯರ್ ಶ್ರಿದೇವಿ, ನಟಿ ತಾರಾ, ನಿರೂಪಕಿ ಅಪರ್ಣಾ, ಡಾಕ್ಟರ್ ಬೀನಾ, ಪೂರ್ಣಿ, ಪಕದ್ಮನೆಯ ಯಶೋಧಕ್ಕ.
ಇವರನ್ನೆಲ್ಲಾ ನನ್ನ ಜೊತೆಯಲ್ಲೇ ಇರಿಸಬೇಕೆಂದು ಬಯಸುತ್ತೇವೆ. ಅವರ ಜೊತೆ ಕಳೆದಂತಹ ಅಮುಲ್ಯ ಕ್ಷಣಗಳನ್ನು ಮೆಲುಕು ಹಾಕುತ್ತಿರುತ್ತೇನೆ. ಅವರಿಗೆಲ್ಲಾ ಅದೆಷ್ಟು ಬಾರಿ ಎಸ್ ಎಮ್ ಎಸ್ ಕಳುಹಿಸಿ ಉಪದ್ರ ಮಾಡಿದೆನೋ!!.
ಅದ್ರೂ ಅವರ ಜೊತೆ ಮಾತನಾಡಿದಾಗೆಲ್ಲಾ ಒಂದು ರೀತಿಯ ಖುಷಿಯಾಗುತ್ತೆ. ಮೆಸೇಜ್ಗೆ ಮರುತ್ತರ ಬಂದ್ರೆ ವ್ಹಾರೆವ್ಹಾ ಗ್ರೇಟ್ ಎಂಬ ಉದ್ಗಾರ ಬರುತ್ತೆ.
Posted by vee at 10:36 PM 3 ನೀವು ಬರೆದದ್ದು
Friday, January 18, 2008
ಯಾದ್ ವಶೇಮ್ ೨
ನೇಮಿಚಂದ್ರರವರ ಕಾದಾಂಬರಿಯಲ್ಲಿ ಇಂತಹ ಹಲವು ಮನತಟ್ಟುವ ವಾಕ್ಯಗಳಿವೆ. ದಿನನಿತ್ಯ ಬಳಸಬಹುದಾದ ಡೈಲಾಗುಗಳಿವೆ. ನನಗಿಷ್ಟವಾಗಿದೆ. ಬಹುಶಃ ನಿಮಗೂ ಇಷ್ಟವಾಗಬಹುದು. ಓದಿ ನೋಡಿ.
- ಬದುಕಬೇಕು ಹಂಚಿಕೊಂಡು, ಬದುಕಬಹುದೆ ಕಿತ್ತುಕೊಂಡು?
- ಹೇಗೆ ವಿವರಿಸಲಿ ಭಾರತವನ್ನು? ಒಂದು ಧರ್ಮ, ಒಂದು ದೇವರ ಈ ನೆಲದಲ್ಲಿ ನಿಂತು ನೂರು ಧರ್ಮ, ಸಾವಿರ ಸಾವಿರ ದೇವರುಗಳ ನಾಡಿನ ಬಗ್ಗೆ ಹೇಗೆಂದು ವಿವರಿಸಲಿ. ಮುಕ್ಕೋಟಿ ದೇವರುಗಳು... ಅವರನ್ನು ಸಹಸ್ರ ಸಹಸ್ರ ನಾಮದಲ್ಲಿ ಕರೆಯುತ್ತಾರೆ. ಕೂಗುತ್ತಾರೆ, ಶಪಿಸುತ್ತಾರೆ, ಬೇಡುತ್ತಾರೆ, ಬೈಯುತ್ತಾರೆ, ಮುನಿಯುತ್ತಾರೆ, ರಾಜಿಯಾಗುತ್ತಾರೆ... ಸಾವಿರ ಹೆಸರಿಟ್ಟು ಕೂಗಿ ಕೊನೆಗೆ ದೇವನೊಬ್ಬನೇ ಎನ್ನುತ್ತಾರೆ.
- ನನ್ನನ್ನು ಕಾಡಿದ್ದು ಇತಿಹಾಸದ ಸಾವುಗಳಲ್ಲ, ವರ್ತಮಾನದ ಸಾವುಗಳು. ಭವಿಷ್ಯದ ಸಾವುಗಳು. ನಾನು ನಿನ್ನೆಗಳ ನೂರು ನೋವನ್ನು ಮರೆಯಲು ಸಿದ್ದ. ನಾಳೆಗಳ ಭರವಸೆಯನ್ನು ಯಾರಾದರೂ ನನಗೆ ನೀಡಿದರೆ...
- ಮನುಷ್ಯ ಮನುಷ್ಯನ ನಡುವೆ ದ್ವೇಷವಿಲ್ಲದ, ಗೋಡೆ ಇಲ್ಲದ ಗುಮಾನಿ ಇಲ್ಲದ ಪೂರ್ಣ ವಿಶ್ವಾಸದ ಒಂದು ಸುಂದರ ಸಂಬಂಧದ ಸೇತುಬಂಧದ ಕನಸು ನನ್ನದು.
- ಸಾವಿರ ವರ್ಷಗಳಿಂದ ಜೊತೆಗೆ ಬದುಕಿದ್ದ ಮುಸ್ಲಿಂಮರು, ಯಹೂದಿಗಳೇಕೆ ಒಂದಾಗಲು ಸಾಧ್ಯವಿಲ್ಲ? ಸಾಧ್ಯವಿಲ್ಲವೆ ಮನಸ್ಸು ಮಾಡಿದರೆ ಒಡೆದ ಮನಸ್ಸುಗಳನ್ನು ಕೂಡಿಸಲು? ಸಾಧ್ಯವಿಲ್ಲವೆ ಶಾಂತಿಗೊಂದು ಅವಕಾಶ ನೀಡಲು? ನಡುವೆ ಎಳೆದ ಗಡಿಗಳನ್ನು, ಗೆರೆಗಳನ್ನು ಅಳಿಸಿ ಕದನ ವಿರಾಮಕ್ಕೆ ಕರೆ ನೀಡಲು ಸಾಧ್ಯವೇ ?
- ಇತಿಹಾಸದ ತಪ್ಪುಗಳನ್ನು ತಿದ್ದಲು ಹೊರಟರೆ, ಹೊಸ ತಪ್ಪುಗಳನ್ನು ಮಾಡುತ್ತೇವೆ. ಇತಿಹಾಸವನ್ನು ಭೂಪಕ್ಕೆ ಬಿಟ್ಟುಬಿಡುವುದು ಮೇಲು. ಭವಿಷ್ಯದ ಭರವಸೆಯಷ್ಟೇ ನಮಗಿರಲಿ. ಮತ್ತೆಂದೂ ಯಾವ ದೇವಲಯವೂ ಒಡೆಯದಿರಲಿ. ಯಾವ ಮಸೀದಿಯು ಉರುಳದಿರಲಿ. ಜನರ ಮನಸ್ಸಿನಲಿ ಕಟ್ಟಿದ ನಂಬಿಕೆಯ ಗೋಪುರಗಳು ಕುಸಿಯದಿರಲಿ. ಯಾವ ಮಾನವನೂ ಮತ್ತೆ ಶಿಲುಬೆಗೇರದಿರಲಿ.
- ಏಕೋ ಮನಸ್ಸಿಗೆ ಹಿತವಿಲ್ಲ. ಏನು ವಾದಿಸುತ್ತಿದ್ದೇನೆ? ಏಕೆ ವಾದಿಸುತ್ತಿದ್ದೇನೆ? ಇಂದಿನ ಸಮಸ್ಯೆಗೆ ಸಾವಿರ ಸಾವಿರ ವರ್ಷಗಳ ಕತೆಯೇಕೆ ಬೇಕು?
- ದಿಟದಲ್ಲಿ ದ್ವೇಷಕ್ಕೆ ಕಾರಣಗಳಿರಲಿಲ್ಲ. ನೆಪಗಳು ಮಾತ್ರವಿದ್ದವು.
- ಉತ್ತರಗಳ ಹುಡುಕಬೇಕಿದೆ ಪ್ರಶ್ನೆಯಾದ ಗೋಡೆಯಾಚೆಗೆ
- ಭೂತದ ಭೂತಗಳನ್ನು ಉಚ್ಚಾಟಿಸಿ ಭವಿಷ್ಯದತ್ತ ಮುಖ ಮಾಡಿ ಹೊರಟ ಝಳಕು ಆ ಎಳೆಯ ಕಣ್ಣುಗಳಲ್ಲಿತ್ತು!
- ನಾನು ಬದುಕುವೆ, ಬದುಕಬೇಕು. ಇದಕ್ಕಿಂತ ಹೆಚ್ಚಿನದು ಏನು ಆಗಬಲ್ಲದು. ನರಕದ ಪಾತಾಳಕ್ಕೆ ತಲುಪಿ ನಿಂತ ಮೇಲೆ ಇನ್ಯಾರ ಭಯ, ಇನ್ಯಾತರ ಭಯ.
Posted by vee at 3:17 AM 3 ನೀವು ಬರೆದದ್ದು
Monday, December 17, 2007
ಕ್ರಿಸ್ಮಸ್ ಯಾರಿಗಿಷ್ಟವಿಲ್ಲ?

Posted by vee at 4:18 AM 1 ನೀವು ಬರೆದದ್ದು
Wednesday, November 14, 2007
ಸವಿನೆನಪಾಗಿ ಉಳಿದ ವೀಣಾಧರಿ
ತಾನು ಇತರೆ ಕೆಲಸದಲ್ಲಿ ನಿರತರಾಗಿರುವಾಗಲೇ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕ್ಯಾಮೆರಾ ಕೈಕೊಟ್ಟಿದ್ದರಿಂದ ಅವರೊಂದಿಗೆ ನಿಂತು ಫೋಟೋ ತೆಗಿಸಬೇಕೆಂದುಕೊಂಡ ಆಶೆ ಅಂದು ನೆರವೇರಲಿಲ್ಲ. ವೀಣಾಧರಿಗೆ ನನ್ನ ಕೊನೇಯ ಪ್ರಶ್ನೆ ಹೀಗಿತ್ತು: ನೀವು ಹೀಗೆ ಏಡ್ಸ್ ರೋಗಿಗಳಿಗೆ ಆಶಾಕಿರಣವಾಗಲು ಹೋಗಿ, ಜನರಲ್ಲಿ ಏಡ್ಸ್ ಕುರಿತ ಭಯ ದೂರವಾಗಿ ಅನೈತಿಕ ಚಟುವಟಿಕೆಗಳು ಹೆಚ್ಚಾಗುವುದಿಲ್ಲವೇ?
ನನ್ನ ಪ್ರಶ್ನೆಯಿಂದ ಅವರು ತುಂಬಾನೇ ಬೇಸರಗೊಂಡಿದ್ದರು. ನಾನು ಆ ಪ್ರಶ್ನೆಯನ್ನು ವೀಣಾಧರಿ ಎಂಬ ಉತ್ತಮ ಸಮಾಜ ಸೇವಕಿಗೆ ಕೇಳಬಾರದಿತ್ತೇನೊ ಎಂದು ಮತ್ತೆ ನನಗೆ ಅನ್ನಿಸಿತ್ತು. ಆ ಸಂದರ್ಶನ ನಂತರ ಮತ್ತೆ ಒಂದೆರಡು ಬಾರಿ ನಾನು ಅವರನ್ನು ಬೇಟಿಯಾಗಿದ್ದೆ.
ಅದೊಂದು ಸಮಾರಂಭದಲ್ಲಿ ವೀಣಾಧರಿ ಹೇಳಿದ್ದರು ಏಡ್ಸ್ ಎಂದಾಕ್ಷಣ ಸಾವಲ್ಲ ಯಾವ ಖಾಯಿಲೆಗೂ ಇಲ್ಲದ ವಿಶೇಷ ದಿನ ಏಡ್ಸ್ ರೋಗಕ್ಕೆ ಯಾಕೆ? ಏಡ್ಸ್ ರೋಗಿಗಳನ್ನು ಅಷ್ಟೊಂದು ಕೇವಲವಾಗಿ ನೋಡುವ ಅವಶ್ಯಕತೆಗಳಿಲ್ಲ. ಇತ್ತೀಜೆಗೆ ಏಡ್ಸ್ ರೋಗಿಗಳಿಂದ ವೈದ್ಯರುಗಳು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಗಟ್ಟಲೆ ಹಣ ವಸೂಲಿ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏಡ್ಸ್ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ ಎಂಬ ಅಂಕಿ ಅಂಶಗಳೆಲ್ಲ ಸುಳ್ಳು. ಒಬ್ಬ ಏಡ್ಸ್ ರೋಗಿಯನ್ನು ಅವನು ಹೋದ ಕಡೆಯಲೆಲ್ಲ ಪರೀಕ್ಷಿಸಿ ನೊಂದಣಿ ಮಾಡಿಸುತ್ತಾರೆ. ಇದರಿಂದ ಅಂಕಿ ಅಂಶಗಳಲ್ಲಿ ಏರು ಪೇರಾಗುತ್ತಿದೆ.
ವೈದ್ಯರುಗಳಿಂದ ಹಾಗೂ ಇತರೆ ಸಂಸ್ಥೆಗಳಿಂದ ವಂಚಿತರಾದ HIV ಪೀಡಿತರು ತಮ್ಮ ಸಮಸ್ಯೆಗಳನ್ನು ಬರೆದಂತಹ ಹಲವಾರು ದಾಖಲೆಯ ಪತ್ರಗಳು ತಮ್ಮಲ್ಲಿ ಇವೆ. ಅವುಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಮುಂದೊಂದು ದಿನ ಇವೆಲ್ಲವುಗಳಿಗೂ ಪರಿಹಾರ ಒದಗಿಸುತ್ತೇನೆ ಎಂದಿದ್ದ ವೀಣಾಧರಿ ಇಂದು ನಮ್ಮಿಂದ ಬಹುದೂರ ಹೋಗಿದ್ದಾರೆ. ಅವರ ಸಾವಿನ ಸುತ್ತ ಹಲವು ಅನುಮಾನಗಳಿವೆ ಎಂಬ ಅಂಶದೆಡೆಗೆ ಇತ್ತಿಚೆಗೆ ಮಾಧ್ಯಮಗಳು ಪ್ರಕಟಿಸಿದ್ದವು. ಅವುಗಳನ್ನು ನಿರ್ಲಕ್ಷಿಸುವಂತಿಲ್ಲ.
Posted by vee at 4:52 AM 2 ನೀವು ಬರೆದದ್ದು
Tuesday, October 16, 2007
ಯಾದ್ ವಶೇಮ್ - ೧
- ಹಗಲು ಬಾಡುವ ಹೊತ್ತು ಇರುಳು ಮೆಲ್ಲನೆ ಕಣ್ತೆರೆದಿತ್ತು. ಸೂರ್ಯ ಮುಳುಗಿತ್ತಿದ್ದ ಸಮುದ್ರದಾಳಕ್ಕೆ ಇಳಿಯುತ್ತಿದ್ದ. ಇಳಿವ ಸೂರ್ಯನ ಕೆಂಪು ಬೆಳಕಿನಲ್ಲಿ ನಮ್ಮ ಬದುಕಿನ ಸಂಜೆಯಲ್ಲಿ ನೆನಪುಗಳ ಬುತ್ತಿ ಬಿಚ್ಚಿಕೊಂಡಿತು.
- ಈ ಹುಡುಗಿ ನನ್ನ ಬದುಕಿಗೆ ಬಂದು ಅದೆಷ್ಟು ವರ್ಷಗಳಾದವು. ದಶಕಗಳೇ ಕಳೆದು ಹೋದವು. ಆದರೂ ಕೆಲವೊಮ್ಮೆ ಅನಿತಾ ಅಪ್ಪಟ ಅಪರಿಚಿತಳಂತೆ ಕಂಡುಬಿಡುತ್ತಾಳೆ - ವಿವೇಕ್
- ಯುದ್ದ ಮುಗಿದಿತ್ತು ಯುರೋಪಿನಲ್ಲಿ. ನನ್ನೆದೆಯ ಕದನಕ್ಕೆ ಕೊನೆ ಎಲ್ಲಿತ್ತು? ಎಲ್ಲಿ ಅಮ್ಮ ಅಕ್ಕ ತಮ್ಮ? ಎಲ್ಲವರು? ಬದುಕುಳಿದರೆ, ಬಲಿಯಾದರೆ, ಹೇಳಲು ಯಾರಿದ್ದರು? ಇಲ್ಲಿ ಒಡೆಯಬಹುದೆ ನನ್ನ ಇತಿಹಾಸದ ಒಡವುಗಳೆಲ್ಲ. ಮರಳಿ ಎದುರಾಗಬಹುದೆ, ಹೊರಳಿ ಬರಬಹುದೆ ನನ್ನವರು ಚರಿತ್ರೆಯ ಆಳದಿಂದೆದ್ದು?
- ಎಷ್ಟೊಂದು ಬದುಕು ಹಿಂದಿದೆ. ಒಂದಿಷ್ಟೇ ಬದುಕು ಮುಂದೆ. ಕಳೆದ ಬದುಕಿನ ತುಂಬಾ ಹುಡುಕಾಟವಿದೆ- ಹೊರಗೆ ಹುಡುಕಿದ್ದು, ನನ್ನೊಳಗೆ ಹುಡುಕಿದ್ದು, ಎದೆಯಕದಗಳನ್ನೆಲ್ಲ ತಟ್ಟಿ ತಡಕಿದ್ದು, ಯಾರು ನಾವು? ಎಲ್ಲಿಂದ ಬಂದೆವು?
- ಕಳೆದುಕೊಳ್ಳಬಹುದಾದ ಎಲ್ಲವನ್ನೂ ಕಳೆದುಕೊಂಡ ಮೇಲೆ ಇನ್ನು ಕಳೆದುಕೊಳ್ಳುವ ಭಯವೆ ಇಲ್ಲದ ನಿರ್ಲಿಪ್ತತೆ ಆ ಬಿರಿದ ಕಣ್ಣುಗಳಲ್ಲಿ.
- ಗೋರಿಗಳ ಎದುರಲ್ಲಿ ಸತ್ತವರ ನಡುವೆ ಅಗಲಿದ ಆತ್ಮಗಳ ಇರುವಲ್ಲಿ ಎರಡು ಎಳೆಯ ಜೀವಗಳ ನಡುವೆ ಒಂದು ನೋವಿನ ಸಂಬಂಧ, ಮೌನದಲ್ಲಿ, ನಿಶ್ಶಬ್ದದಲ್ಲಿ ಏಕಾಂತದಲ್ಲಿ ಆರಂಭವಾಗಿತ್ತು... ಆ ಸಂಬಂಧಕ್ಕೆ ಯೌವನದ ಬುದ್ಬುರಗಳಿರಲಿಲ್ಲ, ಕಿಶೋರದ ಆವೇಗವಿರಲಿಲ್ಲ. ಧುಮುಕುವ ಜಲಪಾತದ ಭೋರ್ಗರೆತವಿರಲಿಲ್ಲ. ಸಮುದ್ರದ ಮೊರೆತವಿರಲಿಲ್ಲ.
- ಬಹುಶ: ನನಗೆಂದೂ ಸ್ಮಶಾನ, ಗೋರಿಪಾಳ್ಯ ಇವೆಲ್ಲವೂ ಭಯದ ವಿಷಯವಾಗಲೇ ಇಲ್ಲ.
- ನನ್ನದೊಂದೇ ಪ್ರಶ್ನೆ - ಯುದ್ದ ಯಾವಾಗ ಮುಗಿಯುತ್ತೆ.
- ಹೊರಗಿನಿಂದ ಬಂದ ಬ್ರಿಟಿಷರನ್ನು ತೊಲಗಿ ಭಾರತದಿಂದ ಎಂದು ಮಾಡಬಹುದು. ನಮ್ಮೊಳಗಿನಿಂದಲೇ ನಮ್ಮ ನಡುವೆಯೇ ಹುಟ್ಟುವ ಹಿಟ್ಲರುಗಳನ್ನು ತೊಲಗಿಸುವುದು ಹೇಗೆ?
- ಹಣ ಏನು ಯಾರ್ ಬೇಕಾದ್ರು ಸಂಪಾದಿಸ್ತಾರೆ. ಗುಣ ತರಾಕಾಗುತ್ತಾ.. ಅಪ್ಪಟ ಅನಕ್ಷರಸ್ಥ ಅಮ್ಮ ಹೇಳಿದ್ದಳು!
- ಮತ್ತೆಲ್ಲವನ್ನೂ ಎಲ್ಲರನ್ನೂ ಕಿತ್ತುಕೊಂಡಿದೆ ಬದುಕು ನನ್ನಿಂದ. ಶಾಶ್ವತ ವಿಷಾದದ ಏಕತಾನತೆಯಷ್ಟೇ ಇನ್ನು ಉಳಿದಿರುವುದು.
- ಯಾರು ಉಳಿದಿರಬಹುದು ನನ್ನ ಇಡೀ ವಂಶದಲ್ಲಿ? ಯಾರು ಉಳಿದಿರಬಹುದು ನನ್ನ ರಕ್ತ ಹಂಚಿಕೊಂಡವರಲ್ಲಿ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ, ಅತ್ತೆಯಂತೆಯೇ ನಾನೂ ನನ್ನ ವಂಶದ ಕತೆಗಳನ್ನು ಹೇಳಬಲ್ಲೆನೆ? ನನ್ನೊಳಗಿನ ಈ ಕತೆಗಳು ನನ್ನೊಡನೆಯೇ ಮಣ್ಣಾಗುತ್ತವೆಯೇ?
- ಬರಲಿರುವ ನಾಳೆಗಳಲ್ಲಿ ನಿನ್ನೆಗಳ ಹುಡುಕಿ ಹೋಗುವ ತುಡಿತವಿತ್ತು. ಬಂದ ಹಾದಿಯನ್ನೊಮ್ಮೆ ಹಿಂದೆ ತಿರುಗಿ ನೋಡುವ ತವಕವಿತ್ತು. ಅವೆಲ್ಲವೂ ಸದ್ಯಕ್ಕೆ ಹ್ಯಾನಾಳ ಎದೆಯ ಗೂಡಿನಲ್ಲಿ ಭದ್ರ ಕದ ಬಿಗಿದು ಅಗುಳೆ ಹಾಕಿತ್ತು.
- ಮರೆಯಬಹುದೆ ತನ್ನವರನ್ನು ಅವರ ಸಾವು ಬದುಕಿನ ಪತ್ತೆ ಇಲ್ಲದ ಭೂತವನ್ನು, ಹಿಂದೆ ಬಿಟ್ಟು ಬಂದ ಬದುಕನ್ನು?
- ‘ಹಾಂ. ನಡೆದಿತ್ತು ಒಂದೇ ಒಂದು’ ಹಿಟ್ಲರನ ವಿರುದ್ದ ನಡೆದ ಒಂದೇ ಒಂದು ಸಾರ್ವಜನಿಕ ಪ್ರತಿಭಟನೆ - ಮಹಿಳೆಯರದಾಗಿತ್ತು!
- ನನಗೆ ನಂಬಿಕೆ ಇದೆ ಜನಗಳ ಶಕ್ತಿಯಲ್ಲಿ ಅನ್ಯಾಯದ ವಿರುದ್ದ ದನಿ ಎನ್ನುವ ಜನರ ಸಂಘಟನೆಯಲ್ಲಿ ನಾನೇನೂ ಆಗದಿದ್ದರೂ, ಆ ಗುಂಪಿನಲ್ಲೊಂದು ಸಣ್ಣ ದನಿಯಾಗಲು ಬಯಸುತ್ತೇನೆ.
- ಹಿಟ್ಲರ್ ನಿಜಕ್ಕೂ ಅಂದು ಸತ್ತನೆ? ಇಲ್ಲ ಇಲ್ಲಿ ಎಲ್ಲೋ ಯಾರದೋ ಮಿದುಳಲ್ಲಿ, ಎದೆಯಲ್ಲಿ ಇನ್ನೂ ಉಸಿರಾಡುತ್ತಿರುವನೆ, ಸಮಯ ಕಾದು ಜಿಗಿದು ಹೊರಬರಲು? ಹಿಟ್ಲರ್ ಎಲ್ಲಿ ಬೇಕಾದರೂ ಹುಟ್ಟಬಹುದು. ಅಮೇರಿಕಾದಲ್ಲೂ ಇಸ್ರೇಲಿನಲ್ಲೂ ಅಹಿಂಸೆಯನ್ನೇ ಬೋಧಿಸಿದ ನಮ್ಮ ಭಾರತದಲ್ಲೂ. ನಮ್ಮೆದ್ಯ ಅಸಹನೆಯಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ಅಹಂಕಾರದಲ್ಲಿ ಹಿಟ್ಲರ್ ಇದ್ದಾನೆ. ನಮ್ಮ ದುರಭಿಮಾನದಲ್ಲಿ. ಯಾವುದೇ ಕ್ಷಣವನ್ನು ಗಲಭೆಯಾಗಿಸಿ, ರಕ್ತಪಾತವಾಗಿಸಿ ವಿಜ್ರಂಭಿಸಲು ಕಾದ ಹಿಟ್ಲರನಿದ್ದಾನೆ. ಬಹುಶ: ನಮ್ಮೊಳಗೇ ಅವನ ಸಂಹಾರವಾಗಬೇಕಿದೆ ನಮ್ಮೊಳಗೇ....
( ನೇಮಿಚಂದ್ರರವರ ಇತ್ತೀಚೆಗೆ ಬಿಡುಗಡೆಯಾದ ಯಾದ್ ವಶೇಮ್ ಕಾದಂಬರಿಯ ಕೆಲವು ಆಯ್ದ ವಾಕ್ಯಗಳು)
Posted by vee at 2:06 AM 3 ನೀವು ಬರೆದದ್ದು
Monday, October 15, 2007
ನನ್ನ ನೆಚ್ಚಿನ ಬರಹಗಾರ್ತಿ ಸಿಕ್ಕಾಗ...
Posted by vee at 10:05 PM 3 ನೀವು ಬರೆದದ್ದು





